      ಮೂಲದೊಡನೆ ಪರಿಶೀಲಿಸಿ

ಕೇರೋ ಆಮ್ಲ

ಪರ್‍ಮಾನೋ ಸಲ್ಫ್ಯೂರಿಕ್ ಆಮ್ಲ H2SO5. ಪೊಟ್ಯಾಸಿಯಂ ಪರ್‍ಸಲ್ಫೇಟನ್ನು ಸಾರ ಸಲ್ಫ್ಯೂರಿಕ್ ಆಮ್ಲದೊಡನೆ ಅರೆದು ಒಂದು ಗಂಟೆಯ ಅನಂತರ ಈ ಮಿಶ್ರಣವನ್ನು ಮಂಜುಗಡ್ಡೆಗೆ ಹಾಕಿ ಪರ್‍ಮಾನೋ ಸಲ್ಫ್ಯೂರಿಕ್ ಆಮ್ಲವನ್ನು ಪ್ರಥಮ ಬಾರಿಗೆ ಕೇರೋ ತಯಾರಿಸಿದ್ದರಿಂದ (1898) ಇದಕ್ಕೆ ಕೇರೋ ಆಮ್ಲವೆಂದು ಹೆಸರಿಡಲಾಯಿತು. ಬೇಯರ್ ಮತ್ತು ವ್ಹಿಲಿಗರ್ ಎಂಬುವರು ಬೇರಿಯಂ ಫಾಸ್ಫೇಟಿನೊಂದಿಗೆ ಫಲಿತದ್ರಾವಣದ ಮಿಶ್ರಣವನ್ನು ಕಲಕಿ ಕೇರೋ ಆಮ್ಲವನ್ನು ಬಿಡುಗಡೆಮಾಡಿ ಪಡೆದರು(1901). ಸಾರ ಸಲ್ಫ್ಯೂರಿಕ್ ಆಮ್ಲಕ್ಕೆ 5% ಹೈಡ್ರೊಜನ್ ಪರಾಕ್ಸೈಡನ್ನು ಸೇರಿಸುವುದರಿಂದ ಕೇರೋ ಆಮ್ಲವನ್ನು ತಯಾರಿಸಬಹುದು.

H2SO4 + H2O2 ®  H2SO5  + H2O

ಸಲ್ಫರ್ ಟ್ರೈ ಆಕ್ಸೈಡ್ ಹೆಚ್ಚು ಸಾರದ ಹೈಡ್ರೋಜನ್ ಪರಾಕ್ಸೈಡಿನ ಮೇಲೆ ವರ್ತಿಸಿದಾಗ ಸರಿಸುಮಾರು ಶುದ್ಧವಾದ ಕೇರೋ ಆಮ್ಲ ಉತ್ಪತ್ತಿಯಾದುದನ್ನು ಆರ್ಹಲೆ ಎಂಬಾತ ತೋರಿಸಿಕೊಟ್ಟ(1909). ಮುಂದೆ 1910ರಲ್ಲಿ ಡಿ ಆನ್ಸ್ ಮತ್ತು ಫ್ರೆಡರಿಚ್ ಎಂಬುವರು ಅನ್‍ಹೈಡ್ರಸ್ ಹೈಡ್ರೊಜನ್ ಪರಾಕ್ಸೈಡನ್ನು ಕ್ಲೋರೋ ಸಲ್ಫ್ಯೂರಿಕ್ ಆಮ್ಲದ ಮೇಲೆ ಪರಿವರ್ತಿಸುವುದರ ಮೂಲಕ ಶುದ್ಧವಾದ ಕೇರೋ ಆಮ್ಲವನ್ನು ಪಡೆದರು. ದ್ರವವಸ್ತುವಾಗಿ ಪಡೆಯುವ ಇದನ್ನು ಶೈತ್ಯಗೊಳಿಸಿದಾಗ ನಿಧಾನವಾಗಿ ಹರಳುಗಳಾಗುವುದು.

ClSO3H + H2O2   ®   HCl  + H2SO5

ಪರ್‍ಡೈಸಲ್ಫ್ಯೂರಿಕ್ ಆಮ್ಲವನ್ನು (ಮಾರ್ಷಲ್ ಆಮ್ಲ) ತಯಾರಿಸಲು ಉಪಯೋಗಿಸುವ ಉಪಕರಣವನ್ನೇ ಅಳವಡಿಸಿಕೊಂಡು ಅದೇ ವಾತಾವರಣದಲ್ಲಿ ಸಾರಸಲ್ಫ್ಯೂರಿಕ್ ಆಮ್ಲವನ್ನು ವಿದ್ಯುದ್ವಿಶ್ಲೇಷಿಸಿ ಕೇರೋ ಆಮ್ಲವನ್ನು ತಯಾರಿಸಬಹುದು.
ಶುದ್ಧವಾದ ಕೇರೋ ಆಮ್ಲ ಬಿಳಿಬಣ್ಣದ ಸ್ಫಟಿಕಾಕೃತಿಯ ಘನ. ಇದು 45 ಡಿಗ್ರಿ ಸೆಂ. ಉಷ್ಣತೆಯಲ್ಲಿ ದ್ರವವಾಗುವುದು. ಸಾಕಷ್ಟು ದಿನಗಳ ವರೆಗೆ ಸ್ಥಿರವಾಗಿರುತ್ತದೆ. ಪರ್‍ಸಲ್ಫ್ಯೂರಿಕ್ ಆಮ್ಲದಂತೆಯೇ ಇದು ಸಹ ಪ್ರಬಲ ಉತ್ಕರ್ಷಣಕಾರಿ. ಆದರೆ ಅದರಂತಲ್ಲದೆ ಪೊಟ್ಯಾಸಿಯಂ ಅಯೊಡೈಡಿನಿಂದ ಕೂಡಲೆ ಅಯೊಡೀನನ್ನು ಬಿಡುಗಡೆಮಾಡುವುದು. ಮಾರ್ಷಲ್ ಆಮ್ಲದಿಂದ ಇದು ಭಿನ್ನವಾಗಿರುವುದನ್ನು ಈ ಕ್ರಿಯೆಯಿಂದ ಗುರುತಿಸಬಹುದು. ಸಲ್ಫರ್ ಡೈಆಕ್ಸೈಡನ್ನು (Sಔ2) ಸಲ್ಫರ್ ಟ್ರೈ ಆಕ್ಸೈಡಾಗಿಯೂ (Sಔ3) ಫೆರಸ್ ಲವಣಗಳನ್ನು ಫೆರಿಕ್ ಲವಣಗಳಾಗಿಯೂ ಹೈಡ್ರೊಜನ್ ಕ್ಲೋರೈಡನ್ನು ಕ್ಲೋರೀನಾಗಿಯೂ ಹೈಡ್ರೊಜನ ಬ್ರೋಮೈಡನ್ನು ಬ್ರೋಮಿನ್ನಾಗಿಯೂ ಹೈಡ್ರೊಜನ್ ಅಯೋಡೈಡನ್ನು ಅಯೊಡೀನಾಗಿಯೂ ಉತ್ಕರ್ಷಿಸುವುದು. ಆದರೆ ಹೈಡ್ರೋಜನ್ ಫ್ಲೋರೈಡಿನ ಮೇಲೆ ವರ್ತಿಸುವುದಿಲ್ಲ. ಅನಿಲೀನನ್ನು ತತ್‍ಕ್ಷಣವೇ ಅನಿಲೀನ್‍ಬ್ಲ್ಯಾಕ್ ಆಗಿ ಉತ್ಕರ್ಷಿಸುತ್ತದೆ. ಉಣ್ಣೆ ಮತ್ತು ಸೆಲ್ಯುಲೋಸನ್ನು ಕಾರ್ಬನೀಕರಿಸುವುದು. ಬೆಳ್ಳಿ, ತಾಮ್ರ, ಮ್ಯಾಂಗನೀಸ್, ಕೋಬಾಲ್ಟ್ ಮತ್ತು ನಿಕ್ಕಲ್ ಲವಣಗಳಿಂದ ಅವುಗಳ ಪರಾಕ್ಸೈಡುಗಳನ್ನು ಒತ್ತರಿಸುತ್ತದೆ. ಪಮ್ರ್ಯಾಂಗನೇಟುಗಳನ್ನು ಚಲುವೆಮಾಡುವುದಿಲ್ಲ. ಕ್ರೋಮಿಕ್ ಅಥವಾ ಟಿಟ್ಯಾನಿಯಂ ಲವಣಗಳನ್ನು ಉತ್ಕರ್ಷಿಸುವುದೂ ಇಲ್ಲ. ಈ ಕ್ರಿಯೆಗಳಲ್ಲಿ ಇದು ಹೈಡ್ರೋಜನ್ ಪರಾಕ್ಸೈಡಿನಿಂದ ಭಿನ್ನವಾಗಿದೆ.
ಹೈಡ್ರೋಜನ್ ಪರಾಕ್ಸೈಡಿನೊಡನೆ ಕೇರೋ ಆಮ್ಲ ವರ್ತಿಸಿ ಆಕ್ಸಿಜನನ್ನು ಬಿಡುಗಡೆ ಮಾಡುವುದು.
H2SO5 + H2O2  ®   H2SO4 + H2O + O2
¸
ಸಲ್ಫ್ಯೂರಿಕ್ ಆಮ್ಲದೊಂದಿಗೆ ಬಟ್ಟಿ ಇಳಿಸಿದಾಗ ಹೈಡ್ರೊಜನ್ ಪರಾಕ್ಸೈಡನ್ನು ಕೊಡುತ್ತದೆ.
					H2SO5
H2SO5  + H2O ®   H2SO4 + H2O2  
ಕೇರೋ ಆಮ್ಲದ ಘನರೂಪದ ಲವಣಗಳಾವುವೂ ತಿಳಿದಿಲ್ಲ. ಆದರೆ ಹೈಡ್ರೊಜನ್ ಪರಾಕ್ಸೈಡು ಏಅಟSಔ3     ರ ಮೇಲೆ ವರ್ತಿಸಿದಾಗ   KClSO3   ಲವಣ ದ್ರವರೂಪದಲ್ಲಿ ಉತ್ಪತ್ತಿಯಾಗುವುದೆಂದು ತಿಳಿದುಬಂದಿದೆ. ಇದರ ಲವಣಗಳಿಗೆ ಅಂಥ ಪ್ರಾಮುಖ್ಯವೇನೂ ಇಲ್ಲ.
ಕೇರೋ ಆಮ್ಲ ಏಕಪ್ರತ್ಯಾಮ್ಲೀಯ (ಮಾನೋಬೇಸಿಕ್) H2SO5 ಆಮ್ಲವೇ ಅಥವಾ ದ್ವಿಪ್ರತ್ಯಾಮ್ಲೀಯ (ಡೈಬೇಸಿಕ್) ಊ2S2ಔ9 ಆಮ್ಲವೇ ಎಂಬುದರ ಬಗ್ಗೆ ವಿವಾದವಿದ್ದೇ ಇದೆ. ಅದರ ಪೊಟ್ಯಾಸಿಯಂ ಲವಣದ ವಿಶ್ಲೇಷಣೆ ಸಂಪೂರ್ಣವಾದುದಲ್ಲ. ಕಾರಣ    ಏಊSಔ5 ಕೊನೆಯ ಘಟ್ಟದಲ್ಲಿ   K2S2O9H2O ರಚನೆಯನ್ನೇ ಪಡೆಯುತ್ತದೆ.
ಕೇರೋ ಆಮ್ಲದ ದ್ರಾವಣದಲ್ಲಿ Sಔ3 : ಪರಾಕ್ಸೈಡಿನ  ಔ (ಆಕ್ಸಿಜನ್ನಿನ) ಪ್ರಮಾಣ 1:1 ಎಂದು ಗೊತ್ತಾಗಿದೆ. ಆದ್ದರಿಂದ ಅದರ ಸೂತ್ರ    Sಔ3 + ಔ + ಊ3ಔ ಅಥವಾ ಊ2Sಔ5 ಪರ್‍ಮಾನೋ ಸಲ್ಫ್ಯೂರಿಕ್ ಆಮ್ಲ.
ಕೇರೋ ಆಮ್ಲದ ಪೊಟ್ಯಾಸಿಯಂ ಲವಣದೊಡನೆ ಬೆಂeóÁಯಿಲ್ ಕ್ಲೋರೈಡ್ ವರ್ತಿಸಿ ಬೆಂeóÁಯಿಲ್ ವ್ಯುತ್ಪನ್ನ(ಡಿರೈವೆಟಿವ್) ಆಗುತ್ತದೆ. ಇದು ಪ್ರತ್ಯಾಮ್ಲದೊಡನೆ ಜಲವಿಶ್ಲೇಷಿಸಿ ಕೇರೋ ಮತ್ತು ಬೆಂeóÉೂೀಯಿಕ್ ಆಮ್ಲಗಳು ಉತ್ಪತ್ತಿಯಾಗುವುವು; ಮತ್ತು ಆಮ್ಲೀಯ ಜಲವಿಶ್ಲೇಷಿಸಿ ಸಲ್ಪ್ಯೂರಿಕ್ ಆಮ್ಲ ಮತ್ತು ಪರ್‍ಬೆಂeóÉೂೀಯಿಕ್ ಆಮ್ಲಗಳನ್ನೀಯುವುದು. ಕೇರೋ ಆಮ್ಲ ಏಕ ಪ್ರತ್ಯಾಮ್ಲೀಯ ಆಮ್ಲವೆಂಬುದನ್ನು ಲವಲೇಶವೂ ಅನುಮಾನವಿಲ್ಲದ ಹಾಗೆ ಈ ಕ್ರಿಯೆ ಸ್ಥಾಪಿಸುವುದು.
ಲೆಕ್ಕಾಚಾರದ ಪ್ರಕಾರ ಬೇಕಾಗುವಷ್ಟು ಕ್ಲೋರೋ ಸಲ್ಫೋನಿಕ್ ಆಮ್ಲವನ್ನು ಶುದ್ಧವಾದ ಹೈಡ್ರೊಜನ್ ಪರಾಕ್ಸೈಡಿನ ಮೇಲೆ ಶೈತ್ಯದಲ್ಲಿರುವಾಗ ಸೇರಿಸಿ ಕೇರೋ ಆಮ್ಲವನ್ನು ವಿಶ್ಲೇಷಿಸುವ ವಿಧಾನ ಮೇಲೆ ಸೂಚಿಸಿರುವ ಅಣುಸೂತ್ರವನ್ನು ಸಮರ್ಥಿಸುವುದು. ಇದರ ಪ್ರಕಾರ ಕೇರೋ ಆಮ್ಲದ ರಚನಾಸೂತ್ರವನ್ನು ಹೀಗೆ ಬರೆಯಬಹುದು.
ಇದನ್ನು ಹೈಡ್ರೋಜನ್ ಪರಾಕ್ಸೈಡಿನ ಮಾನೋ ಸಲ್ಫೋನೇಟಾಗಿ ಭಾವಿಸಬಹುದು.

ಚಿತ್ರ-1-ಮತ್ತು-2

ಮೀಥೈಲ್ ಆರೆಂಜ್ ಅಥವಾ ಫೀನಾಲ್‍ಫ್ತಲೀನನ್ನು ಸೂಚಕವಾಗಿ ಅಳವಡಿಸಿಕೊಂಡು ಉತ್ಕರ್ಷಣಕಾರಿಯಾದ ಕೇರೋ ಆಮ್ಲವನ್ನು ಪ್ರಬಲ ಕ್ಷಾರಗಳೊಡನೆ ಅನುಮಾಪನ (ಟ್ರೈಟ್ರೇಷನ್) ಮಾಡಲು ಆಗುವುದಿಲ್ಲ. 
                                                                    
 (ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ